ಆಧಾರ | Aadhaara Christian Song Lyrics
Kanadda Old Christian Songs Lyrics.
Kannada Christian Latest Songs Lyrics.
famous Kannada christian songs 2023
Song Credits:
Lyrics:
ಆಧಾರ ನನಗೆ ಆಧಾರ ನನ್ನ ಸಂಗಡವಿದ್ದು
ನಡೆಸುವ ನಿನ್ನ ಕೃಪೆಯೇ ಆಧಾರ
ಆಶ್ರಯವು ನನಗೆ ಆಶ್ರಯವು ಆಪತ್ಕಾಲದಲ್ಲಿ
ಆಶ್ರಯವು ನಿನ್ನ ನಾಮವೆ ಆಶ್ರಯವು
ತಂದೆ ತಾಯಿ ಇಲ್ಲದಿದ್ದರೂ ಬಂಧುಬಳಗ ಬಾರದಿದ್ದರೂ
ಲೋಕವೆಲ್ಲ ಒಂದಾದರು ಬಾಧೆಗಳೇ ಬಂದುನಿಂತರು ।। ಆಧಾರ ।।
1) [ ಭಕ್ತಿಹೀನ ಬಂಧನದಲ್ಲಿ ನಾನಿರುವಾಗ
ಶ್ರಮೆಯ ಸಾಗರದಲ್ಲಿ ಮುಳುಗಿರುವಾಗ ]।।2 ।।
ಇಕ್ಕಟ್ಟಿನಲ್ಲಿ ವಿಶಾಲತೆಯ ನೀಡಿದ ನನ್ ದೇವಾ ।। 2 ।।
ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ
ನಿನ್ನತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ।। ಆಧಾರ ।।
2) [ ಬಡತನದ ಸುಳಿಯಿಂದ ಐಶ್ವರ್ಯದ ತೀರಕ್ಕೆ
ನಿನ್ ಸ್ವರವೇ ಮಾರ್ಗವಾಗಿ ನಡೆಸಿದೆ ಯೆಸಯ್ಯಾ ] ।। 2 ।।
ಮರೆಯನು ನಿನ್ನ ತೊರೆಯನು ಎಂದೇಳಿದ ನನ್ ದೇವಾ ।। 2 ।।
ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ
ನಿನ್ನ ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ।। ಆಧಾರ ।।
3)[ ಭಯಪಟ್ಟ ವೇಳೆಯಲಿ ಜೊತೆಯಿದ್ದೇ ದೇವಾ
ಅವಮಾನದ ಸಮಯದಲಿ ಬಲ ನೀಡಿದೆ ನನ್ ದೇವಾ ]।। 2 ।।
ಕತ್ತಲಲಿ ನೀ ಬೆಳಕಾಗಿ ನಡೆಸುವ ನನ್ ದೇವಾ ।। 2 ।।
ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ
ನಿನ್ನ ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ।। ಆಧಾರ ।।
Search more songs like this one
0 Comments